Quantcast
Channel: Rambling with Bellur
Viewing all articles
Browse latest Browse all 814

ಬಪ್ಪನ ಕರುಣೆಯೇ ಸಾಕಪ್ಪ !

$
0
0

ಬಪ್ಪನ ಕರುಣೆಯೇ ಸಾಕಪ್ಪ !
ರಚನೆ: ರಾಮಕೃಷ್ಣ ಬೆಳ್ಳೂರು

ಶುಭವ ತಂದೆ ನೀ ಗಣಪತಿ ಬಪ್ಪ
ತಾಯಿಯೊಡನೆ ಮತ್ತೆ ಬಾರಪ್ಪ

ನಿನ್ನ ಕರುಣೆಯೇ ಸಾಕಪ್ಪ
ನೀ ಒಲಿದರೆ ಇನ್ನೇನು ಬೇಡಪ್ಪ

ಇಹಕೆ ಬೇಕು ನೀ ಗಣಪತಿ ಬಪ್ಪ
ಮುಕ್ತಿ ಕೊಡುವವ ನೀನೋರ್ವನೇನಪ್ಪ

ಭಕುತರ ನೀನು ಹರಸಪ್ಪ
ನಿನ್ನಲೆ ಮನಸನು ಇರಿಸಪ್ಪ

ಶುಭವ ತಂದೆ ನೀ ಗಣಪತಿ ಬಪ್ಪ
ನನಗೆ ನಿನ್ನ ಕೃಪೆ ಬೇಕಪ್ಪ

ಗರಿಕೆಯ ಕಂಡರೆ ಹಿಗ್ಗುವೆಯಪ್ಪ
ಏಕವಿಂಶತಿ ಮೆಚ್ಚುಗೆಯಪ್ಪ

ಹಾಡಿಗೆ ನಾಟ್ಯಕೆ ನಲಿಯುವೆ ಬಪ್ಪ
ಮೋದಕ ಸವಿದು ಕರಗುತಿಯಪ್ಪ

ಪ್ರತಿ ವರುಷವೂ ಮಣ್ಣಿಂದ ಏಳುತಿಯಪ್ಪ
ಭಕುತಿಯ ನೀರಲಿ ಮುಳುಗುತಿಯಪ್ಪ

ಗೌರಿಯ ಪುತ್ರ ಗಣಪತಿ ಬಪ್ಪ
ಶಿವಸುತ ವಿಘ್ನ ನಿವಾರಕನಪ್ಪ

ಭೂಮಿಗೆ ಮತ್ತೊಮ್ಮೆ ಬಾಪ್ಪಾ ಬಪ್ಪ !
ಭಕುತಿ ಪಥದಿ ಎನ್ನ ಕರೆದೊಯ್ಯಪ್ಪ


Viewing all articles
Browse latest Browse all 814

Trending Articles