Quantcast
Channel: Rambling with Bellur
Viewing all articles
Browse latest Browse all 814

Dairy Day Poems

$
0
0

ಜಗದಬಲ
ರಚನೆ: ರಾಮಕೃಷ್ಣ ಬೆಳ್ಳೂರು

ಜಗದೊಡೆಯನ ಜಟೆಯಿಂದ
ಹರಿದುಬಂದ ಗಂಗೆ
ಕ್ಷೀರಸಾಗರದಿ ಹಾಲಿನೊಡನೆ ಬೆರೆತು
ನಮ್ಮ ಪುಣ್ಯಭೂಮಿಯಲ್ಲಿ ಓಡೋಡಿ ಬಂದು
ಸುಂದರ ಸಿರಿ ಧರೆಯ ನಿಸರ್ಗದಲ್ಲಿರುವ ಒಳಿತನ್ನೆಲ್ಲ ಆಯ್ದು
ಧರ್ಮ ಸ್ಥಳದಿ ಮಂಜುಗೆಡ್ಡೆಯಾಗಿ ಅವತರಿಸಿ
ನವೀನತೆ ತುಂಬಿ ಬಾಲಕರಿಂದ ವೃದ್ಧರವರೆಗೂ
ಎಲ್ಲರೂ ಸವಿಯುವ ಹಾಗೆ
ಕಿಶೋರಾವಸ್ಥೆಯಿಂದ ಪ್ರೌಡಾವಸ್ಥೆಯತ್ತ
ದಾಪುಗಾಲು ಹಾಕುತ್ತಿರುವ
ಎಲ್ಲರ ಮನ ಮನೆಗಳಲ್ಲಿ ಅಜರಾಮರವಾಗಿ
ಬೆಳೆಯುತ್ತಿರವ ಸೌರಭವೇ
ನಮ್ಮ ಮೆಚ್ಚಿನ
ಜಗದಬಲ ಹೊಂದಿರುವ
ಡೈರಿ ಡೇ

_____________________________________________________________________________________

ಒಗ್ಗಟ್ಟಿನಲ್ಲಿ ಬಲವಿದೆ
ರಚನೆ: ರಾಮಕೃಷ್ಣ ಬೆಳ್ಳೂರು

ಒಳ್ಳೆತನದಲ್ಲಿ ಸಿಹಿ ಇದೆ
ಬಾಲ ಸರ್ – ಜಗನ್ ಸರ್ ಇಬ್ಬರಲ್ಲೂ ಒಳ್ಳೆತನವಿದೆ
ಡೈರಿ ಡೇ ಸಂಸ್ಥೆಯಲ್ಲಿ ಬಲವಿದೆ

ಈ ಕಂಪನಿಯಲ್ಲಿ ಎರಡು ದಶಕಕ್ಕೂ ಮೀರಿದ ಅನುಭವವಿದೆ
ನಮ್ಮ ದೇಶದ ಮಣ್ಣಿನ ಸೊಗಡಿದೆ
ಡೈರಿ ಡೇ ಸಂಸ್ಥೆಯಲ್ಲಿ ಬಲವಿದೆ

ಮುನ್ನುಗ್ಗುವ ಛಲವಿದೆ
ಹೋರಾಡಲು ಬೆಟ್ಟದಷ್ಟು ಗುಂಡಿಗೆಯಿದೆ
ಡೈರಿ ಡೇ ಸಂಸ್ಥೆಯಲ್ಲಿ ಬಲವಿದೆ

ಶಿಸ್ತು-ಸಹಾನುಭೂತಿ-ಉತ್ಸಾಹವಿದೆ
ಸಮರ್ಪಣಾ ಭಾವದೊಂದಿಗೆ ಆತ್ಮವಿಶ್ವಾಸವಿದೆ
ಡೈರಿ ಡೇ ಸಂಸ್ಥೆಯಲ್ಲಿ ಬಲವಿದೆ

ನಮ್ಮ ಐಸ್ ಕ್ರೀಂನಲ್ಲಿ ಶುಚಿಯೊಂದಿಗೆ ರುಚಿಯಿದೆ
ನಮ್ಮಲ್ಲಿ ಏಕತೆ-ಅನೇಕತೆ-ಏಕಾಗ್ರತೆ ಇದೆ
ಡೈರಿ ಡೇ ಪರಿವಾರದಲ್ಲಿ ಒಗ್ಗಟ್ಟಿನೊಂದಿಗೆ ಬಲವಿದೆ


Viewing all articles
Browse latest Browse all 814

Trending Articles