
ಕರ್ನಾಟಕ ರಾಜ್ಯದಲ್ಲಿ ಎಷ್ಟು ಜಿಲ್ಲೆಗಳಿವೆ ಗೊತ್ತಾ ?
ಇಲ್ಲಿ ಅವುಗಳ ಮೊದಲಕ್ಷರ ಕೊಡಲಾಗಿದೆ. ಜಿಲ್ಲೆಯ ಪೂರ್ಣ ಹೆಸರು ಹೇಳಬಲ್ಲಿರಾ?
ಬಾ
ಬೆಂ ನ
ಬೆಂ ಗ್ರಾ
ಬೆ
ಬ
ಬೀ
ವಿ
ಚಾ
ಚಿ
ಚಿ
ಚಿ
ದ ಕ
ದಾ
ಧಾ
ಗ
ಕ
ಹಾ
ಹಾ
ಕೊ
ಕೋ
ಕೊ
ಮಂ
ಮೈ
ರಾ
ರಾ
ಶಿ
ತು
ಉ
ಉ ಕ
ವಿ
ಯಾ
ಉತ್ತರ. ಮೂವತ್ತೊಂದು [31] ಜಿಲ್ಲೆಗಳು
ಬಾಗಲಕೋಟೆ
ಬೆಂಗಳೂರು ನಗರ
ಬೆಂಗಳೂರು ಗ್ರಾಮಾಂತರ
ಬೆಳಗಾವಿ
ಬಳ್ಳಾರಿ
ಬೀದರ್
ವಿಜಯಪುರ
ಚಾಮರಾಜನಗರ
ಚಿಕ್ಕಬಳ್ಳಾಪುರ
ಚಿಕ್ಕಮಗಳೂರು
ಚಿತ್ರದುರ್ಗ
ದಕ್ಷಿಣ ಕನ್ನಡ
ದಾವಣಗೆರೆ
ಧಾರವಾಡ
ಗದಗ
ಕಲಬುರ್ಗಿ
ಹಾಸನ
ಹಾವೇರಿ
ಕೊಡಗು
ಕೋಲಾರ
ಕೊಪ್ಪಳ
ಮಂಡ್ಯ
ಮೈಸೂರು
ರಾಯಚೂರು
ರಾಮನಗರ
ಶಿವಮೊಗ್ಗ
ತುಮಕೂರು
ಉಡುಪಿ
ಉತ್ತರ ಕನ್ನಡ
ವಿಜಯನಗರ
ಯಾದಗಿರಿ
***
ಅರಿಶಿನ ಕುಂಕುಮ ಅದುವೇ ಕನ್ನಡ ಡಿಂಡಿಮ
ರಚನೆ : ರಾಮಕೃಷ್ಣ ಬೆಳ್ಳೂರು
ಈ ತಿಂಗಳಿಡೀ ಎಲ್ಲೆಲ್ಲೂ ಕಾಣುವುದು ಹಳದಿ-ಕೆಂಪು
ಈ ತಿಂಗಳಿಡೀ ಸಂಭ್ರಮಿಸುವೆವು ಕನ್ನಡದ ಕಂಪು
ಕನ್ನಡದಲ್ಲಿದೆ ಮಾಧುರ್ಯದ ಇಂಪು
ಕನ್ನಡಿಗರ ಔದಾರ್ಯದಲ್ಲಿದೆ ತಂಗಾಳಿಯ ತಂಪು
ಈ ತಿಂಗಳಿಡೀ ಎಲ್ಲೆಲ್ಲೂ ಕಾಣುವುದು ಹಳದಿ-ಕೆಂಪು
ಈ ತಿಂಗಳಿಡೀ ಸಂಭ್ರಮಿಸುವೆವು ಕನ್ನಡದ ಕಂಪು
ಗದ್ಯ ಪದ್ಯಗಳನ್ನೊಳಗೊಂಡ ಸಾಹಿತ್ಯ
ಚಂಪು
ಕರುನಾಡಿನಲ್ಲಿದೆ ವನಸಿರಿಯ ಸೊಂಪು
ಈ ತಿಂಗಳಿಡೀ ಎಲ್ಲೆಲ್ಲೂ ಕಾಣುವುದು ಹಳದಿ-ಕೆಂಪು
ಈ ತಿಂಗಳಿಡೀ ಸಂಭ್ರಮಿಸುವೆವು ಕನ್ನಡದ ಕಂಪು
ಕನ್ನಡ ಸಾಹಿತ್ಯದ ಅನೇಕ ದಿಗ್ಗಜರಲ್ಲಿ
ಎತ್ತರಕ್ಕೆ ನಿಲ್ಲುವರು ಕುವೆಂಪು
ನಮ್ಮ ನಾಡಿಗೆ ಕೀರ್ತಿ ತಂದರು ಧೃವತಾರೆಗಳ ಬೃಹತ್ ಗುಂಪು
ಈ ತಿಂಗಳಿಡೀ ಎಲ್ಲೆಲ್ಲೂ ಕಾಣುವುದು ಹಳದಿ-ಕೆಂಪು
ಪವಿತ್ರವಾದ ಅರಿಶಿನವೇ ಹಳದಿ
ಮಂಗಳಕರ ಕುಂಕುಮವೇ ಕಡುಗೆಂಪು