Quantcast
Channel: Rambling with Bellur
Viewing all articles
Browse latest Browse all 814

ಕ್ಷೀರಸಾಗರ (Ksheerasaagara)

$
0
0
ಕ್ಷೀರಸಾಗರ
ರಚನೆ: ರಾಮಕೃಷ್ಣ ಬೆಳ್ಳೂರುಹೆಣ್ಣಿನ ಮನಸ್ಸು ಹಾಲಿನಂತೆ
ತನ್ನ ಮಗುವನ್ನು ಹಾಲುಣಿಸಿ ಸಲಹುವಳು ಗೋವಿನಂತೆ

ಹೆಣ್ಣಿನ ಮನಸ್ಸು ಹಾಲಿನಂತೆ
ಅವಳು ಪರಿಶುದ್ಧ ಕ್ಷೀರದಂತೆ

ಹೆಣ್ಣಿನ ಮನಸ್ಸು ಹಾಲಿನಂತೆ
ನಕ್ಕರೆ, ಕೆನ್ನೆ ಬೆಣ್ಣೆಯ ಉಂಡೆಯಂತೆ

ಹೆಣ್ಣಿನ ಮನಸ್ಸು ಹಾಲಿನಂತೆ
ತಂಪೆರೆವಳು ನೀರು ಮಜ್ಜಿಗೆಯಂತೆ

ಹೆಣ್ಣಿನ ಮನಸ್ಸು ಹಾಲಿನಂತೆ
ಸಕ್ಕರೆ ಬೆರೆತ ಕೆನೆಯಂತೆ

ಹೆಣ್ಣಿನ ಮನಸ್ಸು ಹಾಲಿನಂತೆ
ಪ್ರೀತಿಸಿದರೆ ಘಮ ಘಮಿಸುವಳು ಬೆಣ್ಣೆ ಕಾಯಿಸಿದ ತುಪ್ಪದಂತೆ

ಹೆಣ್ಣಿನ ಮನಸ್ಸು ಹಾಲಿನಂತೆ
ಹೆಚ್ಚು ಹೊತ್ತು ಕಾಯಿಸಿದರೆ ಉಕ್ಕುತ್ತೆ

ಹೆಣ್ಣಿನ ಮನಸ್ಸು ಹಾಲಿನಂತೆ
ಹುಳಿ ಹಿಂಡಿದರೆ ಒಡೆಯುತ್ತೆ

ಹೆಣ್ಣಿನ ಮನಸ್ಸು ಹಾಲಿನಂತೆ
ಕರುಣಾಮೃತವನ್ನು ಹರಿಸುವಳು ನದಿಯಂತೆ

ಹೆಣ್ಣಿನ ಮನಸ್ಸು ಹಾಲಿನಂತೆ
ನೋಯಿಸಿದರೆ ಹುಳಿ ಮೊಸರಿನಂತೆ

ಹೆಣ್ಣಿನ ಮನಸ್ಸು ಹಾಲಿನಂತೆ
ನೀಲಗಿರಿಯ ಹೆರಿಟೇಜನ್ನು ಶೋಧಿಸಿದರೆ ನಂದಿನಿ ಸಿಗುವಳಂತೆ

ಹೆಣ್ಣಿನ ಮನಸ್ಸು ಹಾಲಿನಂತೆ
ಆದ್ದರಿಂದಲೇ ಚಾಕ್ಲೇಟ್, ಐಸ್ ಕ್ರೀಮ್ಗಳಿಗೆ ಕರಗುವಳು

ಹೆಣ್ಣಿನ ಮನಸ್ಸು ಹಾಲಿನಂತೆ
ಆದ್ದರಿಂದಲೇ ಅವಳು ಹೆಪ್ಪ್ ಆಗುವಳು

***
‘Looking Hip’ is a slang term sometimes defined as fashionably current, and in the know.
ನಾವು ಅದನ್ನ ’ಹಿಪ್’ ಅಂತ ಬಳಸಿಲ್ಲ. ಮಾತಾಡಬೇಕಾದರೆ ’ಹೆಪ್’ ಅಂತಾನೇ ಹೇಳೋದು. (ಉದಾ: ಯೇನ್ ಹೆಪ್ಪಾಗಿದಾಳೆ ನೋಡು ಗುರು) ಈ ಹೆಪ್ನೆಸ್ಗೆ ಮೇಲಿನ ರಚನೆ ಅರ್ಪಣೆ.


Viewing all articles
Browse latest Browse all 814

Trending Articles